KANNADAMAZA DIRECTOR · ACTOR · MUSIC · STORY
Upendra Official Backdrop Banner
OFFICIAL BACKDROP & COVER
Upendra Official Poster
★ 8.8/10

Upendra

ಉಪೇಂದ್ರ

2h 45m ACTION THRILLER ★ 8.8/10
Director Upendra
Producer H.C. Srinivasa
Banner

ನಾನು ಅನ್ನೋ ಅಹಂಕಾರಿ ಹುಡುಗನಿಗೆ ಮೂವರು ಹುಡುಗಿಯರು ಸಿಗುತ್ತಾರೆ. 1. ರತಿ - ಸೌಂದರ್ಯ: ಅವನನ್ನು ಪ್ರೀತಿಸುವವಳು. 2. ಸ್ವಾತಿ - ಜವಾಬ್ದಾರಿ: ಅವನ ಮನೆಯಲ್ಲೇ ಇರುವ ಅವನ ಹೆಂಡತಿ. 3. ಕೀರ್ತಿ - ಹಣ: ಕೋಟ್ಯಾಧಿಪತಿ, ಅವಳ ಆಸ್ತಿಗಾಗಿ ಅವನು ಅವಳನ್ನು ಮದುವೆಯಾಗಲು ಹೋಗುವವನು. ನಾನು ಮೂವರನ್ನೂ ಮೋಸ ಮಾಡಿ, ಮೂವರೂ ನನಗೇ ಬೇಕು ಅಂತ ಹಠ ಮಾಡುತ್ತಾನೆ. ಅವರನ್ನು ಅಪಹರಿಸಿ ಹಳೆಯ ಕಟ್ಟಡಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನಿಗೆ ಇಬ್ಬರು ಸಿಗುತ್ತಾರೆ - ಒಬ್ಬ ಶ್ರೀಮಂತ ಗೋಪಾಲ ಮತ್ತು ಒಬ್ಬ ಬಡವನಾಗಿರುವ ಹಳೆಯ ಶ್ರೀಮಂತ. ಒಬ್ಬನಿಗೆ ಹಣದ ಹಿಂದೆ ಹೋಗು ಅಂತ ನಾನುವೇ ಬುದ್ಧಿ ಹೇಳಿರುತ್ತಾನೆ, ಇನ್ನೊಬ್ಬ ಹಣ, ಹೆಣ್ಣಿನ ಹಿಂದೆ ಹೋಗಿ ಬೀದಿಗೆ ಬಿದ್ದಿರುತ್ತಾನೆ. ಇದನ್ನು ನೋಡಿ ನಾನುಗೆ ಅರಿವಾಗುತ್ತದೆ. ಆಗ ವಿಕ್ರಮಾದಿತ್ಯ ಹೇಳುತ್ತಾನೆ - ಇವರು ನಿಜವಾದ ಹುಡುಗಿಯರಲ್ಲ, ಇವರು ಸೌಂದರ್ಯ, ಜವಾಬ್ದಾರಿ, ಹಣದ ಸಂಕೇತ. ನಾನು ಎಂಬ ಅಹಂ ಸಾಯಬೇಕು. ಕೊನೆಗೆ ನಾನು ಕನ್ನಡಿಯಲ್ಲಿ ತನ್ನನ್ನು ನೋಡಿ ನಾಚಿಕೆಪಟ್ಟು, ತನ್ನ ಮುಖ ಇರುವ ಶರ್ಟ್ ಹರಿದು ತನ್ನ ಅಹಂಕಾರವನ್ನೇ ಕೊಂದು ಹಾಕುತ್ತಾನೆ. ಅಹಂ ಸತ್ತ ಕೂಡಲೇ ಮೂವರು ಹುಡುಗಿಯರು ಮಾಯವಾಗುತ್ತಾರೆ. ಅವನು 'ನಾನು' ನಿಂದ 'ನಾವು' ಆಗಿ ಮಳೆಯಲ್ಲಿ ಹೊರಟು ಹೋಗುತ್ತಾನೆ.

Language Kannada
Country India
Budget
Collection 15cr
Release Date